Learning has no end!

अजरामरवत् प्राज्ञो विद्यामर्थञ्च साधयेत् |

गृहीत इव केशेषु मृत्युना  धर्ममाचरेत् ||

अन्वय: – 

 प्राज्ञ:  विद्यां (च) अर्थं च  अजरामरवत् साधयेत् 

 मृत्युना केशेषु गृहीत इव धर्मं आचरेत्

ತಿಳಿವಳಿಕೆಯುಳ್ಳವನು, ವಿದ್ಯೆಯನ್ನೂ ಧನವನ್ನೂ ತನಗೆ ಎಂದೂ  ಮುಪ್ಪು  ಬಾರದು ಸಾವು ಬಾರದು ಎಂಬಂತೆ ಸಂಪಾದಿಸಬೇಕು. ಅಂತೆಯೇ ಮೃತ್ಯುದೇವತೆಯು ತಲೆಗೂದಲಿಗೆ ಕೈಹಾಕಿ ಎಳೆಯುತ್ತಿದ್ದಾಳೇನೋ ಎಂಬಂತೆ ಭಾವಿಸಿ ಧರ್ಮಕಾರ್ಯವನ್ನು ಮಾಡಬೇಕು. ವಿದ್ಯೆಯನ್ನು ಅರ್ಥವನ್ನು ಸಂಪಾದಿಸುವುದು ನಿಧಾನವಾದರೂ ಧರ್ಮಾಚರಣೆಗೆ ಎಂದಿಗೂ ಚ್ಯುತಿ ಬರದಂತೆ ನೋಡಿಕೊಳ್ಳಬೇಕು. ಪ್ರತಿ ಘಳಿಗೆ ಧರ್ಮಾಚರಣೆಯಲ್ಲಿ ತೊಡಗಬೇಕು  ಅಂದರೆ, ಯಾವ ಘಳಿಗೆಯಲ್ಲಾದರು ಸಾವು ಬರಬಹುದು ಎಂದು ತಿಳಿದು ಧರ್ಮಾಚರಣೆ ಮಾಡಬೇಕು. ಧರ್ಮಕ್ಕೆ ಮೊದಲು ಪ್ರಾಶಸ್ತ್ಯ. ನಂತರ ಮಿಕ್ಕೆಲ್ಲವೂ.

 ವಿದ್ಯೆ ಕಲಿಯಲು ಯಾವುದೇ ವಯೋಮಿತಿಯಿಲ್ಲ. ಬದುಕಿರುವಷ್ಟೂ ದಿನ, ಉಸಿರಾಟದ ಕೊನೆಯ ಘಳಿಗೆಯವರೆಗೂ ಕಲಿಯುವ ಆಸೆಯಿರಬೇಕು.ಅವನೇ ನಿಜವಾದ ವಿದ್ಯಾರ್ಥಿ! ನಿಜವಾದ ಮನುಷ್ಯ. ಏಕೆಂದರೆ ಮನುಜನಿಗೆ ಮನುಜನಾಗಿ ಉಳಿಯಲು ಜ್ನಾನಪ್ರಾಪ್ತಿಯೇ ಮೊದಲ ಆವಶ್ಯಕತೆ! ಇಲ್ಲದಿದ್ದರೆ ಅವನು ಪ್ರಾಣಿಯೇ ಸರಿ!

ಆದರೆ ನಾವು ಇಂದು ನೋಡುತ್ತಿರುವುದಾದರೂ ಏನು? ವಿದ್ಯೆಯ ನಿಜವಾದ ಅರ್ಥ ತಿಳಿಯದೆ ಸಾಕ್ಷರತೆಯನ್ನೇ ವಿದ್ಯೆಯೆಂದು ಭಾವಿಸಿ, ಸಾಕ್ಷರರನ್ನೆಲ್ಲಾ ವಿದ್ಯಾವಂತರೆಂದು ತಪ್ಪಾಗಿ ತಿಳಿಯಲಾಗುತ್ತಿದೆ!

ಯಾವುದೋ ಒಂದು ಪದವಿಯನ್ನು ಪಡೆದುಬಿಟ್ಟರೆ ಅಲ್ಲಿಗೆ ನಮ್ಮ ಕಲಿಕೆಗೆ ಪೂರ್ಣವಿರಾಮ! ಅಲ್ಲಿಗೆ ನಾವು ವಿದ್ಯಾವಂತರು(?)! ಲಕ್ಷಾಂತರ ಖರ್ಚು ಮಾಡಿ ಪಡೆದ ಪದವಿ ವಿದ್ಯೆ ಹೇಗಾದೀತು? ಅದರಿಂದ ಮಾಡಿದ ಖರ್ಚನ್ನು ಮತ್ತೆ  ವಾಪಸ್ಸು ಪಡೆಯುವ ಗುಣ ಬೆಳೆಯುವುದೇ ಹೊರತು ಸೇವಾ ಮನೋಭಾವ ಬರುವುದು ಬಲು ಕಠಿಣ! ಇದೆ ಎಲ್ಲಾ ಭ್ರಷ್ಟಾಚಾರಗಳ ಮೂಲ.

ವಿದ್ಯೆಯೆಂದರೆ ನಮ್ಮನ್ನು ಮುಕ್ತಿಯೆಡೆಗೆ ಒಯ್ಯುವ ಸಾಧನ. सा विद्या या विमुक्तये|  ಮುಕ್ತಿಯೆಂದರೆ ಯಾವುದರಿಂದ?? ನೋವು, ನಲಿವು, ಸುಖ, ದುಃಖ,ಜನನ ಮರಣ ಇವೆಲ್ಲದರಿಂದಲೂ ಮುಕ್ತಿ!

ನಿಜವಾದ ವಿದ್ಯೆ ನಮಗೆ ಅತಿಯಾಸೆ, ಮೂರ್ಖತನದಿಂದ ಮುಕ್ತಿ ಕೊಡುತ್ತದೆ! ಅಲ್ಪತೃಪ್ತರನ್ನಾಗಿಸುತ್ತದೆ. ಇಂತಹ ತಳಪಾಯವಿರುವುದರಿಂದಲೇ ನಮ್ಮ ದೇಶಕ್ಕೆ ಎಂತೆಂತಹ ದಿಗ್ಗಜರು ಬಂದು ಹೋದರೂ ನಮ್ಮ ಬುಡವನ್ನು ಅಲ್ಲಾಡಿಸಲಾಗಲಿಲ್ಲ! ಅನ್ಯರು ನಮ್ಮನ್ನು ಆಳಲು ಬಯಸಿ ಬಂದರೆ ಹೊರತು ನಾವು ಯಾರನ್ನೂ ದಾಸರನ್ನಾಗಿಸಿಕೊಳ್ಳ ಬಯಸಲಿಲ್ಲ! ನಮ್ಮ ವಿದ್ಯೆ,  ಜ್ಞಾನದ ಪ್ರಭಾವದಿಂದಾಗಿ ನಾವು ಬಂದ ಅತಿಥಿಗಳನ್ನೆಲ್ಲಾ ದೇವರಂತೆ ಕಂಡೆವು, ಆದರಿಸಿದೆವು. ಎಲ್ಲರನ್ನೂ ಪ್ರೀತಿಯಿಂದ ಕಂಡೆವು! ನಾವೂ ಬೆಳೆಯುತ್ತಾ ಅನ್ಯರನ್ನೂ ಬೆಳೆಸುವ, ಬೆಳೆಯುವಂತೆ  ಮಾಡುವ ಮನೋಭಾವವನ್ನು ನಮ್ಮ ಪೂರ್ವಿಕರು ನಮ್ಮ ರಕ್ತದ ಕಣಕಣದಲ್ಲೂ ತುಂಬಿದ್ದಾರೆ! ಎಂತಹ ಅದ್ಭುತವಾದ ಗುಣ ನಮ್ಮ ದೇಶದ ಜನರದ್ದು! ಆದರೆ ಇಂತಹ ಒಂದು ಒಳ್ಳೆಯ ವಿಚಾರವನ್ನು ಅರಿಯದ ಅನ್ಯದೆಶೀಯರು ನಮ್ಮನ್ನು ಲೂಟಿ ಮಾದಬಯಸಿದರು! ಮಾಡಿದರೂ ಕೂಡ ! ನಮ್ಮ ಅತ್ಯಮೂಲ್ಯ ಸಂಪತ್ತನ್ನೆಲ್ಲಾ ನಾಶ ಮಾಡಿದರು! ಮಿಕ್ಕದ್ದನ್ನು ದೋಚಿಕೊಂಡು ಹೋದರು! ಆದರೆ ಅವರಿಗೆ ತಿಳಿಯದು ವಿದ್ಯೆ

न चोर हार्यं न च राज हार्यं न भ्रातृ भाज्यं न च भारकारि |

व्यये कृते वर्धत एव नित्यं विद्या धनं सर्व धन प्रधानं!

ಕಳ್ಳನಿಂದ   ಕದಿಯಲಾಗದ, ರಾಜರು ದೋಚಲಾಗದ ಸಹೋದರರು ವಿಭಜಿಸಲಾಗದಂತಹ ಎಂದಿಗೂ ಭಾರವೆನಿಸದನ್ತಹದು ಈ ವಿದ್ಯೆ ಎಂದು!

ವಿದ್ಯೆ ಕೇವಲ ಪುಸ್ತಕಗಳನ್ನು ಆಮೂಲಾಗ್ರವಾಗಿ ಓದುವುದರಿಂದ ಬರುವಂತಹುದಲ್ಲ! ಸಾಧನೆಯಿಂದ ದೊರೆಯುವ ವರ ವಿದ್ಯೆ! ನಮ್ಮಲ್ಲಿ ಇನ್ನೂ ಸಾಧಿಸುವ ಛಲವಿದ್ದೇ ಇದೆ! ವಿದ್ಯೆ ಪಡೆಯುವ ಮಾರ್ಗವೂ ತಿಳಿದಿದೆ! ಆದರೆ ಇಂದು ಬೂದಿ ಮುಚ್ಚಿದ ಕೆಂಡದಂತೆ ನಮ್ಮ ಜ್ಞಾನ, ವಿದ್ಯೆ ಎಲ್ಲವೂ ಅಂತರಂಗದ ಆಳದಲ್ಲಿ ಅಡಗಿ ಕುಳಿತಿದೆ! ಅದನ್ನು ಮತ್ತೆ ಪ್ರಜ್ವಲಿಸುವಂತೆ ಮಾಡುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು. ಅಂತಹ ಕೆಲಸ ಮಾಡುವ ಗುರುಗಳ ಅವಶ್ಯಕತೆ ಇಂದು ಬಹಳವಾಗಿದೆ! ನಮ್ಮ ವಿದ್ವಜ್ಜನರೆಲ್ಲಾ ದಯಮಾಡಿ ಮುಂದೆ ಬನ್ನಿ ; ಕೆಂಡಗಳು ಮತ್ತೆ ಪ್ರಜ್ವಲಿಸುವಂತೆ ಮಾಡುವ ಕಾಯಕದಲ್ಲಿ ಕೈಜೋಡಿಸಿ! ಬನ್ನಿ ವಿದ್ಯೆಯತ್ತ ಸಾಗೋಣ! ವಿದ್ಯಾವoತರಾಗೋಣ!  ಇನ್ನಾದರು ಎಚ್ಚೆತ್ತು ಕೊಂಡು ನಿಜವಾದ ವಿದ್ಯಾವಂತರಾಗಿ! ವಿದ್ಯೆ ಹಾಗೂ ಅವಿದ್ಯೆ ಎರಡರ ಮಿಲನದಿಂದ ಮಾತ್ರ ಬದುಕು ಸಾರ್ಥಕತೆಯನ್ನು ಪಡೆಯಬಲ್ಲದು! ಅವಿದ್ಯಾ ಮಾತ್ರದಿಂದ ಬದುಕು ಸಾಗಿಸಲಾಗದು! ಕೇವಲ ಅವಿದ್ಯೆ ಎಂದಿಗೂ ವಿನಾಶಕಾರಿ! ವಿದ್ಯೆಯ ಸಾರಥ್ಯವಿಲ್ಲದ ಅವಿದ್ಯೆ ಖಂಡಿತಾ ವಿನಾಶಕಾರಿ! ನಮ್ಮ ದೇಶದ ಪ್ರಧಾನ ಧನ ವಿದ್ಯೆ. ಆದ್ದರಿಂದ ನಾವು ಸದಾ ಶ್ರೀಮಂತರೇ ಸರಿ!

Advertisements

4 Comments Add yours

 1. Dr S M Mishra says:

  Thanks for the nice things brought back from the past to dwell upon our present.
  But kindly see that the spellings are exact and the source is given wherever available.
  The non-Sanskrit language is not my cup of tea,but I keep to my little Sanskrit space !

  Like

 2. bharathiya sandesh says:

  Thank u sir! But would you please tell me where exactly you found the mistake in spellings?? Since to my little knowledge, I did not find any! Kindly correct me if I am wrong somewhere!

  Like

 3. Parameshwar says:

  ಇದು ಸುಭಾಷಿತ ಅಂದಮೇಲೆ ಚೆನ್ನಾಗಿ ಇದ್ದೇ ಇರುತ್ತದೆ!
  ನಿಮ್ಮ ಬರವಣಿಗೆ ಇಷ್ಟ ಆಯಿತು…..

  Like

  1. bharathiya sandesh says:

   ಪರಮೇಶ್ವರ್ ರವರೇ ಧನ್ಯವಾದಗಳು. ದಯಮಾಡಿ ನಮ್ಮನ್ನು ಹೀಗೆಯೇ ಪ್ರೋತ್ಶಾಹಿಸುತ್ತಿರಿ ನಿಮ್ಮ ಪ್ರೋತ್ಸಾಹ ನಮಗೆ ಬಹಳ ಆವಶ್ಯಕ ! 🙂

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s